ಪ್ರಯತ್ನದ ಫಲ
ಯಾವುದೇ ಒಬ್ಬ ಮನುಷ್ಯ ಒಂದು ನಿರ್ದಿಷ್ಟ ಗುರಿ ಇಟ್ಟುಕೊಂಡಿರಬೇಕು. ಅಂದರೆ ಮುಂದೆ ನಾನು ಹೀಗಾಗಬೇಕು ಅನ್ನೋ ಗಟ್ಟಿ ನಿಶ್ಚಯ ಮನಸ್ಸಿನಲ್ಲಿದ್ರೆ ಏನನ್ನಾದರೂ ಸಾಧಿಸಬಹುದು. ಇರಬೇಕು ಗುರಿಯನ್ನು ಇಟ್ಟುಕೊಳ್ಳುವುದರ ಜೊತೆಗೆ ಪ್ರಯತ್ನವು ಇರಬೇಕು. ಪ್ರಯತ್ನವಿದ್ದರೆ ಫಲ ಖಂಡಿತ ದೊರಕುತ್ತದೆ. ಹೀಗೆ ಪ್ರಯತ್ನ ಪಟ್ಟು ಸಾದಿಸಿದವರಲ್ಲಿ ಡೇವಿಡ್ ಮನ್ ಕೂಡ ಒಬ್ಬ.
ಡೇವಿಡ್ ಹಾರ್ಟಮನ್ ಒಬ್ಬ ಕುರುಡ. ಅವನ ತಂದೆಯ ಹೆಸರು ಫ್ರೆಡ್ ಹಾರ್ಟಮನ್. ಅವನ ತಂದೆ ಒಬ್ಬ ಬ್ಯಾಂಕ್ ನೌಕರನಾಗಿದ್ದ. ಒಂದು ದಿನ ಡೇವಿಡ್ "ನಾನು ಬೇಸ್ ಬಾಲ್ ಡಬೇಕು.ಅಂತಿದೀನಿ ಆಡಬಹುದ"ಎಂದು ತನ್ನ ತಂದೆಯನ್ನು ಕೇಳಿದನು. ಅದಕ್ಕೆ ಅವನ ತಂದೆ "ಪ್ರಯತ್ನ ಪಡು ನೋಡೋಣ ಪ್ರಯತ್ನ ಪಡದಿದ್ದರೆ ಏನು ಅಂತ ಗೊತ್ತಾಗೋದಿಲ್ಲ ಪ್ರಯತ್ನ ಮಾಡು ನೀನು ಬೇಸ್ ಬಾಲ್ ಆಡುತ್ತೀಯ" ಎಂದು ಹೇಳಿದರು .ಆ ನಂತರ ಡೇವಿಡ್ ಬೇಸ್ ಬಾಲ್ ಆಡಿ ಕಲಿತನು.ಅವನ ತಂದೆ ಕೂಡ ಅದಕ್ಕೆ ಪ್ರೋತ್ಸಾಹಿಸಿದರು.ಡೇವಿಡ್ ತನ್ನ ಕತ್ತಲ ಜಗತ್ತನ್ನು ಕಂಡು ಹೆದರಿ ಕೊಳ್ಳುತ್ತಿದ್ದನು.ಆಗ ಅವನ ಅಮ್ಮ ಬಂದು ಮಗನನ್ನು ತಬ್ಬಿಕೊಂಡು "ನಾನಿಲ್ಲಿದೀನಿ ಮಗು ,ನನಗೆ ಗೊತ್ತು ಕತ್ತಲ ಜಗತ್ತು ತುಂಬ ಹೆದರಿಕೆ ಉಂಟು ಮಾಡುತ್ತೆ.ನಿಲ್ಲೋದು ಕಷ್ಟ ಆಗುತ್ತೆ ,ಆದರೆ ನಾನು ಇಲ್ಲೆ ಇದೀನಿ "ಅಂತ ಧೈರ್ಯ ತುಂಬುತ್ತಿದ್ದಳು.ಆದರೆ ಅವನ ಅಕ್ಕ ಬಾರ್ಬರಾ ಆಗಲ್ಲ.ಡೇವಿಡ್ ಅವನ ಅಕ್ಕನನ್ನು ಏನಾದರೂ ತಂದುಕೊಡು ಎಂದು ಕೇಳಿದರೆ, "ಏ,ನಿನ್ನ ಕೆಲಸ ನೀನೆ ಮಾಡಿಕೊಳ್ಳುವುದನ್ನ ರೂಢಿ ಮಾಡ್ಕೋ ಯಾವಾಗಲೂ ನಿನ್ನ ಜೊತೆ ಯಾರಿರುತ್ತಾರೆ" ಎಂದು ಗದರಿಸುತ್ತಿದ್ದಳು.
ತಂದೆ ಪ್ರಯತ್ನ ಪಡು ನೋಡೋಣ ಅನ್ನುತ್ತಿದ್ದರು. ತಾಯಿ ನಾನಿದೀನಿ ಮಗು ಅನ್ನುತ್ತಿದ್ದಳು.ಅಕ್ಕ ನಿನ್ನಕೆಲಸ ನೀನೆ ಮಾಡಿಕೊ ಅನ್ನುತ್ತಿದ್ದಳು.ಹೀಗೆ 3 ಜನರ ಮಧ್ಯ ಡೇವಿಡ್ ಬೆಳೆದನು.ಡೇವಿಡ್ ತನ್ನ ಚಿಕ್ಕ ವಯಸ್ಸಿನಿಂದಲೂ ತಾನು ಡಾಕ್ಟರ್ ಆಗಬೇಕು ಅಂದುಕೊಂಡಿದ್ದ.ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದ ಅವನು ಕುರುಡರ ಶಾಲೆ ಬಿಟ್ಟು ಅದೇ ಊರಿನಲ್ಲಿರುವ ಶಾಲೆ ಸೇರಿಕೊಂಡನು. ಹಾಗೆ ಬೆಳಿತಾ ಬೆಳಿತಾ ತಾನು ಡಾಕ್ಟರ್ ಆಗಬೇಕು ಅನ್ನೋ ಹಠನೂ ಬೆಳೀತು.ಆದರೆ ಎರಡೂ ಕಣ್ಣು ಕಾಣದ ಕುರುಡ ಡಾಕ್ಟರ್ ಆಗೋದಕ್ಕೆ ಸಾಧ್ಯವಿಲ್ಲ ಅನ್ನೋದನ್ನ ಡೇವಿಡ್ ಗೆ ಹೇಳವು -ದು ಹೇಗೆ ಎಂದು ಮನೆಯವರೆಲ್ಲ ಕಂಗಾಲ -ದರು.ಆಗ ಅವನು ಸೇರಬೇಕಾದ ಕಾಲೇಜಿನ ಶಿಕ್ಷಕರಿಂದ ಹೇಳಿಸಿದರು. ಅದಕ್ಕೆ ಡೇವಿಡ್ ಹೇಳಿದ "ನೋಡಿ ನನಗೆ ಕಣ್ಣು ಕಾಣೋದಿಲ್ಲ ಅನ್ನೋದು ಬಿಟ್ಟರೆ ನಾನು ಬೇರೆಯವರಿಗಿಂತ ಕಡಿಮೆ ಇಲ್ಲ. ಎಲ್ಲರಿಗೂ ಒಂದಲ್ಲ ಒಂದು ವೈಖಲ್ಯ ಇರುತ್ತೆ.ಜೀವನದಲ್ಲಿ ಏನನ್ನೂ ಸಾದಿಸದೆ,ವಿಶೇಷವಾಗಿ ಏನನ್ನೂ ಮಾಡದೆ ಇರುವವನೇ ಈ ಜಗತ್ತಿನ ನಿಜವಾದ ಅಂಗವಿಕಲ ಅಂತ ನಾನು ಭಾವಿಸಿದ್ದೇನೆ. ನಾನು ಒಬ್ಬ ಒಳ್ಳೆಯ ಮನೋರೋಗ ತಜ್ಞ ಆಗ್ತೀನಿ ಅಂತ ನನಗೆ ನಂಬಿಕೆ ಇದೆ. ದಯವಿಟ್ಟು ನನಗೆ ಕಾಲೇಜಿಗೆ ಅಡ್ಮಶನ್ ಕೊಡಿ"ಎಂದು ಕೇಳಿಕೊಂಡನು. ಆಗ ಅವನಿಗೆ ಕಾಲೇಜಿನಲ್ಲಿ ಅಡ್ಮಿಶನ್ ಸಿಕ್ಕಿತು. ಆ ಕಾಲೇಜಿನಲ್ಲಿ ನಾಲ್ಕು ವರ್ಷ ಓದಿ ನಿಜವಾದ ಪ್ರತಿಭಾವಂತ ವಿದ್ಯಾರ್ಥಿ ಅನ್ನಿಸಿಕೊಂಡ ಡೇವಿಡ್ ಎಲ್ಲರಿಗಿಂತ ಹೆಚ್ಚಿನ ಅಂಕಗಳನ್ನು ತೆಗೆದುಕೊಂಡನು.ಆದರೆ ಕುರುಡನಾದ ನನಗೆ ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಸಿಗುತ್ತಾ ಅನ್ನೋ ಪ್ರಶ್ನೆ ಅವನನ್ನೂ ಕೂಡ ಕಾಡುತ್ತಿತ್ತು.
ಡೇವಿಡ್ ಹಾರ್ಟಮನ್ ಅಮೆರಿಕದ 10 ಮೆಡಿಕಲ್ ಕಾಲೇಜುಗಳಿಗೆ ಅರ್ಜಿ ಹಾಕಿದ್ದ.ಅದರಲ್ಲಿ 9 ಕಾಲೇಜುಗಳು ಅವನನ್ನ ತಿರಸ್ಕರಿಸಿದವು.ಆಗ ಡೇವಿಡ್ ನ ಕುರುಡು ಕಣ್ಣುಗಳಲ್ಲಿ ಮೊದಲ ಬಾರಿಗೆ ನಿರಾಶೆಯ ಕಣ್ಣೀರು ಸುರಿಯಿತು. ಎಲ್ಲಾ ಮುಗಿದು ಹೋಯಿತು ಅನ್ನೋ ಹಾಗೆ ಅತ್ತುಬಿಟ್ಟ
ಅಮೆರಿಕಾದಲ್ಲಿ ಟೆಂಪಲ್ ಯುನಿವ -ರ್ ಸಿಟಿ ಆಫ್ ಮೆಡಿಶನ್ ಅನ್ನೋ ಸಂಸ್ಥೆ ಇತ್ತು. ಆ ಸಂಸ್ಥೆಯ ಅಸಿಸ್ಟೆಂಟ್ ಒಬ್ಬರು ಈ ಹುಡುಗನಿಗೆ ಒಂದು ಅವಕಾಶ ಕೊಡಬೇಕು ಅಂತ ವಾದಿಸಿದರು. ಅವತ್ತೇ ಮಧ್ಯಾಹ್ನ ಡೇವಿಡ್ ಅಕ್ಕ ಬಾರ್ಬರಾ ಅವನಿಗೆ ಫೋನ್ ಮಾಡಿ "ನೀನು ಸಾಧಿಸಿ ಬಿಟ್ಟೆ ಕಣೋ ನಿನಗೆ ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಸಿಕ್ಕಿದೆ ಕಣೋ"ಎಂದು ತುಂಬ ಸಂತೋಷದಿಂದ ಹೇಳಿದಳು.ಆ ನಂತರ ಡೇವಿಡ್ ಹಾರ್ಟ್‍ಮನ್ ಕಷ್ಟಪಟ್ಟು ಮೆಡಿಕಲ್ ಓದಿದ.ರೋಗಿ ಗಳ ಬಾಯಿ ಕಣ್ಣು ಗಾಯಗಳನ್ನು ನೋಡೋಕೆ ಆಗುತ್ತಿರಲಿಲ್ಲ.ಅವರಿಗೆ ಪರೀಕ್ಷೆ ಮಾಡೋಕೆ ಆಗುತ್ತಿರಲಿಲ್ಲ.ಆದರೂ ಅವನ ಎದುರಿಗೆ ಕುಳಿತುಕೊಳ್ಳುತ್ತಿದ್ದ ರೋಗಿಗಳು ಅತ್ಯಂತ ಸ್ಪಷ್ಟವಾಗಿ ಅವನ ಮೇಲೆ ವಿಶ್ವಾಸ ಇಟ್ಟು ಅವನಿಗೆ ತಮ್ಮ ಎಲ್ಲಾ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದರು.ಡೇವಿಡ್ ಮೊದಲನೆಯ ರಾಂಕ ಪಡೆದು ಎಲ್ಲಾ ಪರೀಕ್ಷೆಗಳನ್ನು ಪಾಸ್ ಮಾಡಿದ.
ಒಂದು ದಿನ ಡೇವಿಡ್ ಗೆ ಸನ್ಮಾನ ಸಮಾರಂಭ ಏರ್ಪಡಿಸಿದ್ದರು.ಅವನಿಗೆ ತುಂಬ ಸಂತೋಷವಾಗಿತ್ತು.ಅಲ್ಲಿಯ ಪ್ರೊಫೆಸರ್ ಒಬ್ಬರು "ನಮ್ಮ ಡೇವಿಡ್ ಉಳಿದ ವಿದ್ಯಾರ್ಥಿಗಳಿಗಿಂತ ತುಂಬಾ ಡಿಫರೆಂಟ್ "ಅಂತ ಹೊಗಳಿದರು.ಅದಕ್ಕೆ ಡೇವಿಡ್ ಎದ್ದು ನಿಂತು "ಅಪ್ಪ ಹೇಳುತ್ತಿದ್ದುದು ನಿಜ ಅನ್ನಿಸುತ್ತೆ ಪ್ರಯತ್ನ ಪಟ್ಟು ನೋಡು ಪ್ರಯತ್ನ ಪಡೆದ ಹೊರತು ಅದು ಏನು ಅಂತ ಗೊತ್ತಾಗೋಲ್ಲ ಅಪ್ಪ ಹೇಳಿದ್ದು ಸರಿ"ಎಂದು ಹೇಳಿದನು.
ಹೀಗೆ ಡೇವಿಡ್ ಪ್ರಯತ್ನ ಪಟ್ಟಿದ್ದಕ್ಕೆ ಡಾಕ್ಟರ್ ಆದ. ಅವನ ಪ್ರಯತ್ನಕ್ಕೆ ಪಲ ಸಿಕ್ಕಿತು ಸಾಧನೆ ಮಾಡಿದವರಿಗೆಲ್ಲಾ ಎಲ್ಲಾ ಅನುಕೂಲಗಳು ಇರುವುದಿಲ್ಲ. ಯಾವ ಅಡೆ ತಡೆಗಳು ಇದ್ದರೂ್ ಅದನ್ನು ನಿವಾರಿಸಿ ಮುನ್ನಡೆಯಬೇಕು. ಪ್ರಯತ್ನ ಪಟ್ಟು ಗುರಿ ಸೇರಬೇಕು.
-- ಎ.ಆರ್.ಆಶಾ
No comments:
Post a Comment